A Paradigm of a Sick Mind
Inside the sick mind...
ಆತ್ಮೀಯ ಸಾಮಾನ್ಯ ಪೊಲೀಸರೇ, ನೀವೆಲ್ಲರೂ ರೈತ, ಕಾರ್ಮಿಕ ವರ್ಗ ಹಾಗೂ ಮಧ್ಯಮ ವರ್ಗದ ಮಕ್ಕಳಾಗಿದ್ದು, ಸಮಾಜದ ಕೆಳಸ್ತರದಿಂದ ಬಂದವರಾಗಿದ್ದೀರಿ. ಶೋಷತ ಸಾಮಾಜಿಕ ವ್ಯವಸ್ಥೆ ನಿಮ್ಮನ್ನು ಈ ಉದ್ಯೋಗಕ್ಕೆ ಬರುವಂತೆ ಮಾಡಿದೆ. ನಿಮ್ಮ ಆತ್ಮಗೌರವವನ್ನು ಮರೆತು ನೀವು ಮೇಲಾಧಿಕಾರಿಗಳಿಂದ ಶೋಷಣೆಗೊಳಗಾಗಿ ದುಡಿಯುತ್ತಿದ್ದೀರಿ. ನೀವು ಈ ವ್ಯವಸ್ಥೆಯಿಂದ ಬೇಸತ್ತಿದ್ದೀರಿ. ಕೆಲವರು ಆತ್ಮಹತ್ಯೆಯಂತಹ ಕೃತ್ಯಕ್ಕೂ ಮುಂದಾಗುತ್ತಿದ್ದಾರೆ. ನಿಮ್ಮ ಕೆಲಸದ ನೆಪದಲ್ಲಿ ಜನರ ವಿರುದ್ಧ ಕೆಲಸ ಮಾಡುವಂತೆ ಆಡಳಿತವರ್ಗ ಒತ್ತಡ ಹೇರುತ್ತದಲ್ಲದೇ, ಮುಗ್ದರನ್ನು ಕೊಲ್ಲುವಂತೆ ಹೇಳುತ್ತದೆ. ಸಾಮಾನ್ಯ ಜನರನ್ನು ಬೆದರಿಸಲು ನಿಮ್ಮನ್ನು ಬಳಸುತ್ತದೆ. ನಿಮ್ಮ ಸಮಸ್ಯೆಯನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ನಿಮ್ಮ ಜನರಿಗೆ ನೀವು ಲಾಠಿ ಹಾಗೂ ಬಂದೂಕು ಎತ್ತಬೇಡಿ ಎಂದು ಬರೆದಿದ್ದಾರೆ.
ಇಂತಹ ವ್ಯವಸ್ಥೆ ಹಾಗೂ ಅದರ ರಕ್ಷಕರ ವಿರುದ್ಧ ಪ್ರತಿಭಟಿಸುವಂತೆ ನಕ್ಸಲರು ಪೊಲೀಸರಿಗೆ ಕರೆ ನೀಡಿದ್ದಾರೆ. ಪತ್ರದ ಕೊನೆಯಲ್ಲಿ ಸಿಪಿಐ (ಮಾವೋ) ಎಂದಿದೆ.[WebDuniya]
No comments:
Post a Comment